Customer Consent
- Home
- Customer Consent
ಗ್ರಾಹಕರ ಒಪ್ಪಿಗೆ
ನಾವು ಅಂದರೆ ಮಹೀಂದ್ರಾ ಇನ್ಶೂರೆನ್ಸ್ ಬ್ರೋಕರ್ಸ್ ಲಿಮಿಟೆಡ್ನವರು ನಮ್ಮ ಡೇಟಾ ಬಳಕೆಯ ನೀತಿಗಳನ್ನು ಅಥವಾ ಪಾಲಿಸಿಗಳನ್ನು ನವೀಕರಿಸುತ್ತಿದ್ದೇವೆ. ಇದಕ್ಕನುಸಾರ, ಕಂಪೆನಿ, ಅದರ ಅಂಗಸಂಸ್ಥೆಗಳು, ಅಧೀನ ಸಂಸ್ಥೆಗಳು, ಗುಂಪು ಕಂಪೆನಿಗಳು ಮತ್ತು ಸಂಬಂಧಿತ ಪಕ್ಷಗಳು (ಸಾಮೂಹಿಕವಾಗಿ ಮಹೀಂದ್ರಾ ಗ್ರೂಪ್), ನೀವು ಹಂಚಿಕೊಂಡಿರುವ ಮತ್ತು ಕಂಪೆನಿಯ ದಾಖಲೆಗಳಲ್ಲಿ ಲಭ್ಯವಿರುವ ಪ್ರಕಾರ ನಿಮ್ಮ ಹೆಸರು, ವಿಳಾಸ, ಟೆಲಿಫೋನ್ ಸಂಖ್ಯೆ, ಇಮೇಲ್ ವಿಳಾಸ, ಜನ್ಮ ದಿನಾಂಕ ಮತ್ತು / ಅಥವಾ ವಾರ್ಷಿಕೋತ್ಸವ ದಿನಾಂಕ ಇತ್ಯಾದಿ ಸಂಪರ್ಕ ವಿವರಗಳಿಗೆ ಪ್ರವೇಶವನ್ನು ಹೊಂದಿರತಕ್ಕದ್ದು, ಮತ್ತು ಅವರು ನೀಡುವ ವಿವಿಧ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಮಾಹಿತಿಯನ್ನು ನೀಡಲು ನಿಮ್ಮನ್ನು ಸಂಪರ್ಕಿಸಬಹುದು. ಈ ಸಮ್ಮತಿಯು ನಿಮ್ಮ ಎನ್ಡಿಎನ್ಸಿ (NDNC) ನೋಂದಣಿ ಯಾವುದಾದರೂ ಇದ್ದರೆ ಅದನ್ನು ಅತಿಕ್ರಮಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಯಾವುದೇ ಸಮಯದಲ್ಲಿ ನೀವು ಮಹೀಂದ್ರಾ ಗ್ರೂಪ್ನಿಂದ ಇಂತಹ ಸಂವಹನಗಳು ಪಡೆಯುವುದನ್ನು ನಿಲ್ಲಿಸಲು ಬಯಸುವುದಾದರೆ, ನಿಮ್ಮ ನೋಂದಾಯಿತ ಸಂಖ್ಯೆಯಿಂದ [56161] ಕ್ಕೆ MIBLSTOP ಎಂಬ ಸಂದೇಶವನ್ನು ಕಳುಹಿಸುವ ಮೂಲಕ ಯಾವಾಗ ಬೇಕಾದರೂ ಅಂತಹ ಸಮ್ಮತಿಯನ್ನು ನೀವು ಹಿಂಪಡೆಯಬಹುದು ಎಂಬುದನ್ನು ಸಹ ದಯವಿಟ್ಟು ಗಮನಕ್ಕೆ ತಂದುಕೊಳ್ಳಿ. ಇಂತಹ ಸಂವಹನಗಳನ್ನು ಪಡೆಯುವುದನ್ನು ಮತ್ತೆ ಆರಂಭಿಸಲು ಬಯಸುವುದಾದರೆ [56161] ಕ್ಕೆ MIBLRESTART ಎಂಬ ಸಂದೇಶವನ್ನು ದಯವಿಟ್ಟು ಕಳುಹಿಸಿ